Monday, March 23, 2009

vyanga-ರಂಗ


ಸ್ಲಂಡಾಗ್
ಸ್ಲಂಗಳ ಕೊಡುಗೆ..
ಐದು ವರ್ಷಕ್ಕೊಮ್ಮೆ
ಅಸಂಖ್ಯ ಖಾಯಂ ದೇಣಿಗೆ
ಓಟು ರಾಜಕಾರಣಿಗೆ

ಸ್ಲಂಗಳ ಕೊಡುಗೆ..
ದಿನದಿನಕ್ಕೆ ಬೆಳೆಗೆ
ಕೂಲಿಗಳು, ಮನೆಕೆಲಸಕ್ಕೆ
ಮಾಡಲು ಐಷಾರಾಮಿಗಳ
ಮನೆಗೆಲಸ, ಕಸ ಮುಸುರೆ ಅಡುಗೆ

ಸ್ಲಂಗಳ ಕೊಡುಗೆ..
ಬಂಗ್ಲೆಗಳ ಬೆಳೆ
ಫ್ಲಾಟುಗಳ ಮಳೆ
ರೋಡು ನಾಲೆಗಳ ಕೊಳೆ
ತೊಳೆದು ಕ್ಲೀನ್ ಮಾಡುವ ಕಲೆಗೆ

ಸ್ಲಂಗಳಿಗೆ ಸರ್ಕಾರ ಕೊಡುಗೆ..
ಇಲ್ಲ ಕೂಲಿ, ಒಪ್ಪೊತ್ತು ಕೂಳು ಆಗದು ನನಸು
ಓದು, ಬರಹ ಸ್ಕೂಲು ಇವರಿಗದು ಕನಸು
ವ್ಯಾಧಿ ವ್ಯಥೆ, ಕೊಚ್ಚೆ ಜೊತೆ
ಬದುಕಿರುವರು ಹೇಗೋ ಅರಿವಾಗದು ಇವರ ಚಿಂತೆ

ಇಷ್ಟಾದರೂ...
ಸ್ಲಂಗಳಲ್ಲಿಯೂ ಹೊರಹೊಮ್ಮಿವೆ ಪ್ರತಿಭೆಗಳು
ಯೋಚನೆ- ಯೋಜನೆಗಳ ಲಹರಿಗಳು
ನಿಸರ್ಗದಲಿ ಅರಳುವ ಕುಸುಮಗಳಂತೆ
ತಂತಾನೆ ಮಿನುಗುವ ತಾರೆಗಳಂತೆ
ಮಡಿವಂತ, ಸ್ಥಿತಿವಂತ, ಐಷಾರಾಮಿಗಳಿಗೂ ಸಿಗದ
ಸ್ಲಂ - ನಾಯಿ ಎನಿಸಿದರೂ ದಶಲಕ್ಷಾಧಿಪನಾದ
ಸಿನಿಮೀಯ ಪ್ರಸ್ತಾವನೆಯ ಆಸ್ಕರ್ ಗಳಂತೆ.

2 comments:

  1. bahaLa chennagi heLideeri sir vaastavate haage irodu

    ReplyDelete
  2. SDM ಗೆ ಆಸ್ಕರ್ ಬಂದಾಗ ನಮ್ಮ ಬಾಲ ಇಲ್ದೇ ಇರೋ (ಕಂ)ಮಂತ್ರಿಗಳು ಹೇಳಲಿಲ್ಲವೇ..?
    ನಾವೇ ಇದಕ್ಕೆಲ್ಲ ಕಾರಣರು..ಅಂತ...ಎಷ್ಟು ನಿಜ ಅಲ್ಲವೇ..?
    ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ

    ReplyDelete